ಇದು ನಿಜವಾಗಿಯೂ ಅಮೃತ ಕಾಲವೇ?
ನಮ್ಮ ಶಾಸ್ತ್ರಗಳ ಪ್ರಕಾರ ಅಮೃತ ಕಾಲಕ್ಕೆ ಬಹಳ ಪ್ರಾಮುಖ್ಯತೆ ಇದೆ. ಈ ಸಮಯದಲ್ಲಿ ಮಾಡಿದ ಎಲ್ಲಾ ಕೆಲಸಗಳು ಶುಭಕರವಾಗಿಯೂ ಲಾಭದಾಯಕವಾಗಿಯೂ ಮತ್ತು ಮನುಷ್ಯನ ಅಶೋತ್ತರಗಳನ್ನು ನೆರವೇರಿಸುವಂತಹ ಸಮಯವು ಇದಾಗಿರುತ್ತದೆ ಎಂಬ ನಂಬಿಕೆ ಇದೆ. ಈಗಷ್ಟೇ ಕರೋನ ಮಹಾಮಾರಿ, ನಿಲ್ಲದ ಯುದ್ಧಗಳು, ಪ್ರಕೃತಿಯ ವಿಕೋಪಕ್ಕೆ ನೊಂದು ಬೆಂಡಾಗಿರುವ ಪ್ರಪಂಚ ಇದರ ನಡುವೆ ಯಾವ ಅಮೃತಕಾಲ ಎಂಬುದು ಸಹಜವಾಗಿ ಬರುವ ಪ್ರಶ್ನೆ. ಹೌದು ಪ್ರಪಂಚಾದ್ಯಂತ ಇಂದು ಅನೇಕ ದುರಂತಗಳು ಮತ್ತು ಅನೇಕ ದೇಶಗಳು ಅತಿಯಾದ ಆರ್ಥಿಕ ಮುಗ್ಗಟ್ಟನ್ನು ಅನುಭವಿಸುತ್ತೇವೆ ಮತ್ತು ದಿವಾಳಿ ಸ್ಥಿತಿಗೆ ಬಂದು ತಲುಪಿವೆ ಇಂತಹ ಅನೇಕ ಕೆಟ್ಟ ಘಟನೆಗಳ ನಡುವೆ ಇದಂತಹ ಅಮೃತಕಾಲ ಎಂದು ನೀವೇನಾದರೂ ಪ್ರಶ್ನಿಸುತ್ತಿದ್ದರೆ ಬನ್ನಿ ಅದರ ಬಗ್ಗೆ ಸ್ವಲ್ಪ ಚಿಂತನೆ ಮಾಡೋಣ ಮತ್ತು ಈ ಅಮೃತಗಳಿಗೆ ಯಾರಿಗೆ ಮತ್ತು ಇದರ ಪ್ರಯೋಜನಗಳು ನಮ್ಮ ಸಾಮಾನ್ಯ ಜೀವನದಲ್ಲಿ ಹೇಗಿರುತ್ತವೆ ಎಂಬುದನ್ನ ತಿಳಿಯೋಣ. ನಮ್ಮ ಪ್ರಧಾನ ಮಂತ್ರಿಯಾದ ಶ್ರೀ ನರೇಂದ್ರ ಮೋದಿಯವರು ಭಾರತದ 75ನೇ ಸ್ವತಂತ್ರೋತ್ಸವದ ಸಮಯದಲ್ಲಿ ಅಮೃತಕಾಲದ ಬಗ್ಗೆ ಮಾತನಾಡಿದರು ಮತ್ತು ಅವರ ಅಮೃತಕಾಲದ ಆಲೋಚನೆಯನ್ನು ಹಂಚಿಕೊಂಡರು. ಅವರ ಪ್ರಕಾರ ಮುಂಬರುವ 25 ವರ್ಷಗಳು ಅಂದರೆ ಭಾರತ ತನ್ನ ಸ್ವಾತಂತ್ರದ ನೂರು ವರ್ಷಗಳನ್ನು ಪೂರೈಸುವವರೆಗೂ ಭಾರತದ ಅಮೃತ ಕಾಲವೆಂದು ಬಣ್ಣಿಸಿದ್ದಾರೆ. ಈ ಕಾಲದಲ್ಲಿ ಭಾರತ ತನ್ನ ಸಾಮರ್ಥ್ಯವನ್ನು ಪ್ರಪಂಚಕ್ಕೆ ತೋರಿಸುತ್ತಾ ತನ್ನ ಹಿಂದಿನ ಕಲೋನಿಯಲ್ ಪಳೆಯುಳಿಕೆಗಳನ್ನು ತೊರೆದು ವಿಶ್ವಗುರು ಸ್ಥಾನಕ್ಕೆ ಏರುವ ಕಾಲಘಟ್ಟ. ನೂರಾರು ವರ್ಷಗಳಿಂದ ದಾಳಿಗಳ ಮೇಲೆ ದಾಳಿಗೆ ಒಳಪಟ್ಟು ತನ್ನನ್ನು ತಾನೇ ಮರೆಯಲಾರಂಭಿಸುತ್ತಿದ್ದ ಭಾರತಕ್ಕೆ ಇದು ಅಮೃತಗಳಿಗೆ. ಹಿಂದೆ ಹೇಳಿದ ಹಾಗೆ ಪ್ರಪಂಚದಲ್ಲಿ ಇಂದು ಅನೇಕ ಬಿಕ್ಕಟ್ಟುಗಳು, ಪ್ರಕೃತಿ ವಿಕೋಪಗಳು ಯುದ್ಧಗಳು ನಡೆಯುತ್ತಿದ್ದರು ಭಾರತ ತನ್ನದೇ ಆದ ಛಾಪನ್ನು ಮೂಡಿಸುತ್ತಿದೆ ಮತ್ತು ಪ್ರಗತಿಯ ಪಥದಲ್ಲಿ ಶರವೇಗದಲ್ಲಿ ಸಾಗುತ್ತಿದೆ. ಪ್ರಪಂಚದ ಬೇರೆ ಎಲ್ಲ ದೇಶಗಳು ಭಾರತದ ಕಡೆ ಸ್ನೇಹಕ್ಕಾಗಿ ಮತ್ತು ಸಹಾಯಕ್ಕಾಗಿ ನೋಡುವ ಸ್ಥಿತಿಗೆ ಭಾರತ ಎಂದು ಒಂದು ನಿಂತಿದೆ. ಭಾರತ ತನ್ನ ಆರ್ಥಿಕ ಮತ್ತು ವಿದೇಶ ನೀತಿಗಳಿಂದ ಎಲ್ಲರನ್ನು ಆಕರ್ಷಿಸುತ್ತಿದೆ ಮತ್ತು ಭಾರತದ ಪ್ರಜೆಗಳಲ್ಲಿ ಪ್ರಮುಖವಾಗಿ ಯುವಕರಲ್ಲಿ ಉತ್ಸಾಹ ಮತ್ತು ಆತ್ಮವಿಶ್ವಾಸವನ್ನು ಮೂಡಿಸುತ್ತಿದೆ. ಇಂದು ಭಾರತ ಯುವರಾಷ್ಟ್ರ, ಆದುದರಿಂದ ರಾಷ್ಟ್ರದ ಮುಂದಿರುವ ಸಾಧ್ಯತೆಗಳು ಅನೇಕ ಮತ್ತು ಅನೇಕ ರಾಷ್ಟ್ರಗಳನ್ನು ಹಿಂದಕ್ಕೆ ಹಾಕಿ ಅಗ್ರಜನಾಗುವುದರಲ್ಲಿ ಸಂದೇಹವೇ ಇಲ್ಲ. ಬಹುಶಃ ಮುಂದೊಂದು ದಿನ ಭಾರತವು ವಿಶ್ವಗುರುವಾಗಿ ಪ್ರಪಂಚದ ಶಾಂತಿ ಮತ್ತು ನೆಮ್ಮದಿಗಾಗಿ ತನ್ನ ಪ್ರಕರವನ್ನು ಎಲ್ಲೆಡೆ ಬೀರಬಹುದು. ಇಂತಹ ಸಮಯವನ್ನು ನೆನೆಸಿದರೆ ಪ್ರತಿಯೊಬ್ಬ ಭಾರತೀಯನಿಗೂ ರೋಮಾಂಚನವಾಗುವುದರಲ್ಲಿ ಸಂದೇಹವೇ ಇಲ್ಲ. ಈಗ ಹೇಳಿ ಇಂತಹ ಬದಲಾವಣೆಗಳನ್ನು ತರುವ ಮುಂದಿನ 25 ವರ್ಷಗಳನ್ನ ಅಮೃತಕಾಲ ಎನ್ನದೆ ನೀನೆಂದು ಕರೆಯಬೇಕು?
ಇದು ನಿಜವಾಗಿಯೂ ಅಮೃತ ಕಾಲವೇ? Read More »
